
ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದಾರೆ.
ಆತಿಥೇಯ ದೇಶವಾಗಿರುವ ಕಾರಣ ಅಮೆರಿಕ ಸರ್ಕಾರ ಇರಾನ್ ಅಧ್ಯಕ್ಷರು ಸೇರಿದಂತೆ ಪ್ರಮುಖ ನಿಯೋಗಕ್ಕೆ ವೀಸಾ ಮಂಜೂರು ಮಾಡಿದ್ದು, ಸೆಪ್ಟೆಂಬರ್ 23ರಂದು ಅವರು ಮಾತನಾಡಲಿದ್ದಾರೆ.
ಅಮೆರಿಕದ ಕಟ್ಟುನಿಟ್ಟಿನ ಪ್ರಯಾಣ ನಿರ್ಬಂಧಗಳ ಹಿನ್ನೆಲೆಯಲ್ಲಿ ಇರಾನ್ ನಿಯೋಗವು ಚಿಕ್ಕದಾಗಿದ್ದು, ಮಾಧ್ಯಮ ತಂಡಕ್ಕೂ ವೀಸಾ ನಿರಾಕರಿಸಲಾಗಿದೆ.