
ದೆಹಲಿಯ ಸದಾಫ್ ಎಂಬ ಯುವತಿ ಕಳೆದ 3 ತಿಂಗಳು ಯುಪಿಐ ಬಳಕೆಯನ್ನು ನಿಲ್ಲಿಸಿ ನಗದು ಹಣವನ್ನು ಮಾತ್ರ ಬಳಸುವ ಮೂಲಕ ತನ್ನ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿದ್ದಾಳೆ.
ಡಿಜಿಟಲ್ ಪಾವತಿಯಿಂದ ಹಣದ ಮೌಲ್ಯದ ಅರಿವಾಗುತ್ತಿಲ್ಲ ಎಂದು ಭಾವಿಸಿದ ಆಕೆ, ಈಗ ಶೇ. 80ರಷ್ಟು ನಗದು ಮತ್ತು ಶೇ. 20ರಷ್ಟು ಯುಪಿಐ ಬಳಸುವ 80:20 ಸೂತ್ರವನ್ನು ಅಳವಡಿಸಿಕೊಂಡಿದ್ದಾಳೆ.
ನಗದು ಬಳಸುವುದರಿಂದ ಪರ್ಸ್‌ನಲ್ಲಿರುವ ಹಣದ ಖರ್ಚಿನ ಮೇಲೆ ಸ್ಪಷ್ಟ ನಿಯಂತ್ರಣ ಸಿಗುತ್ತಿದೆ ಎಂದು ಆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿದೆ.