
ಭಾರತದಲ್ಲಿ ಗಲಭೆ ಎಬ್ಬಿಸಲು ವಿದೇಶಿ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ರಾಯಚೂರಿನ ಮೊಹಮ್ಮದ್ ಶಾಹಿಲ್ (24) ಎಂಬಾತನನ್ನು ಸದರಬಜಾರ್ ಪೊಲೀಸರು ಬಂಧಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ 'ರಾಣಾ ಭಾಯ್' ಎಂಬ ಹೆಸರಿನ ಅರಬ್ ಮೂಲದ ವ್ಯಕ್ತಿಯೊಂದಿಗೆ ಜುಲೈ 14ರಿಂದ ಚಾಟಿಂಗ್ ಮಾಡುತ್ತಿದ್ದ ಆರೋಪಿ, ಪಿಸ್ತೂಲ್ ಕೂಡ ಕೇಳಿದ್ದನು.
ಗಲಭೆ ಎಬ್ಬಿಸಲು ಹಣ ಮತ್ತು ಪಿಸ್ತೂಲ್ ಆಮಿಷವೊಡ್ಡಿ ಪ್ರಚೋದನೆ ನೀಡಿದ ಆರೋಪದಡಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಪ್ರಕರಣ ದಾಖಲಾಗಿದೆ.