
ತುಮಕೂರು ಜಿಲ್ಲೆಯ ಕೆಲ ಶಾಲೆಗಳಿಗೆ ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ವಿತರಣೆಯಾಗಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ಕೆಲವೆಡೆ ಇಂಗ್ಲಿಷ್, ಸಮಾಜ ವಿಜ್ಞಾನ, ಹಿಂದಿ ಮತ್ತು ಗಣಿತ ಪುಸ್ತಕಗಳು ಬಾರದೆ ಇರುವುದರಿಂದ ಮಕ್ಕಳ ಕಲಿಕೆ ಕುಂಠಿತಗೊಂಡಿದೆ.
ಪುಸ್ತಕ ಬಾರದ ಕಾರಣ ವಿದ್ಯಾರ್ಥಿಗಳು ಜೆರಾಕ್ಸ್ ಮಾಡಿಸಿಕೊಳ್ಳುವಂತೆ ಶಿಕ್ಷಕರು ಸೂಚಿಸುತ್ತಿದ್ದು, ಪರೀಕ್ಷೆ ಸಮೀಪಿಸುತ್ತಿರುವುದರಿಂದ ಆತಂಕ ಮೂಡಿಸಿದೆ.