
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಮುಕೇಶ್ ಅಂಬಾನಿ ಅವರು 99.7 ಬಿಲಿಯನ್ ಡಾಲರ್ ಆಸ್ತಿ ಮೌಲ್ಯದೊಂದಿಗೆ ಮತ್ತೆ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನ ಪಡೆದಿದ್ದಾರೆ.
ಫೋರ್ಬ್ಸ್ ಬಿಲಿಯನೇರ್ಸ್ ಪಟ್ಟಿಯ ಪ್ರಕಾರ, ಮುಕೇಶ್ ಅಂಬಾನಿ ಅವರು ಟಿಕ್ಟಾಕ್ ಮಾಲೀಕತ್ವದ ಬೈಟ್ಡ್ಯಾನ್ಸ್ ಸಂಸ್ಥಾಪಕ ಝಾಂಗ್ ಯಿಮಿಂಗ್ ಅವರನ್ನು ಹಿಂದಿಕ್ಕಿದ್ದಾರೆ.
ಈ ಮೂಲಕ ಮುಕೇಶ್ ಅಂಬಾನಿ ಅವರು ಜಾಗತಿಕ ಮಟ್ಟದಲ್ಲಿ 21ನೇ ಸ್ಥಾನಕ್ಕೆ ಏರಿದ್ದು, ಗೌತಮ್ ಅದಾನಿ 63.8 ಬಿಲಿಯನ್ ಡಾಲರ್ನೊಂದಿಗೆ 31ನೇ ಸ್ಥಾನದಲ್ಲಿದ್ದಾರೆ.