
ಪ್ರಶಾಂತ್ ವರ್ಮಾ ನಿರ್ದೇಶನದ ‘ಮಹಾಕಾಳಿ’ ಸಿನಿಮಾದ ‘ಶುಕ್ರಾಚಾರ್ಯಸ್ ವಾರ್‌ಕ್ರೈ’ ಎಂಬ 2 ನಿಮಿಷ 55 ಸೆಕೆಂಡುಗಳ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಚಿತ್ರವು 2027ರ ಜನವರಿ 8ರಂದು ತೆರೆಕಾಣಲಿದೆ.
ಅಕ್ಷಯ್ ಖನ್ನಾ ಅವರು ಅಸುರರ ಪರಮಗುರು ಶುಕ್ರಾಚಾರ್ಯರ ಪಾತ್ರದಲ್ಲಿ ಭಯಾನಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಈ ಚಿತ್ರವನ್ನು ಆರ್‌ಕೆಡಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ.
ಪೌರಾಣಿಕ ಕಥಾಹಂದರ ಹೊಂದಿರುವ ಈ ಬಿಗ್ ಬಜೆಟ್ ಸಿನಿಮಾದಲ್ಲಿ ನಟಿ ಶ್ರಿಯಾ ರೆಡ್ಡಿ ಕೂಡ ಪ್ರಮುಖ ಪಾತ್ರದಲ್ಲಿದ್ದು, ಉನ್ನತ ಗುಣಮಟ್ಟದ ವಿಶ್ಯುವಲ್ ಎಫೆಕ್ಟ್ಸ್ ಬಳಸಲಾಗಿದೆ.