
ದೇಶದಲ್ಲಿ ಸಕ್ಕರೆ ಲಭ್ಯತೆ ಹೆಚ್ಚಿಸಲು ಹಾಗೂ ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಮಳೆ ಕಡಿಮೆಯಾಗಿರುವ ಕಾರಣ 2026-27ರ ಪೂರೈಕೆ ವರ್ಷದಲ್ಲಿ ಕಬ್ಬು ಮತ್ತು ಬಿ-ಹೆವಿ ಮೊಲಾಸಿಸ್ನಿಂದ ಎಥೆನಾಲ್ ಉತ್ಪಾದನೆಯನ್ನು ಟೆಂಡರ್ನಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ.
ಅಕ್ಟೋಬರ್ 16ರಂದು ಬಿಪಿಸಿಎಲ್ 1,100 ಕೋಟಿ ಲೀಟರ್ ಎಥೆನಾಲ್ಗೆ ಬಿಡ್ ಆಹ್ವಾನಿಸಿದ್ದು, ಮೆಕ್ಕೆಜೋಳದ ಎಥೆನಾಲ್ ಖರೀದಿ ದರವನ್ನು ಪ್ರತಿ ಲೀಟರ್ಗೆ ₹71.86ರಿಂದ ₹68.86ಕ್ಕೆ ಇಳಿಕೆ ಮಾಡಲಾಗಿದೆ.
ಮೆಕ್ಕೆಜೋಳ, ಮುರಿದ ಅಕ್ಕಿ, ಎಫ್ಸಿಐ ಹೆಚ್ಚುವರಿ ಅಕ್ಕಿ ಮತ್ತು ಸಿ-ಹೆವಿ ಮೊಲಾಸಿಸ್ ಬಳಕೆಗೆ ಅನುಮತಿ ನೀಡಲಾಗಿದ್ದು, ಧಾನ್ಯಗಳಿಂದ ಎಥೆನಾಲ್ ಉತ್ಪಾದಿಸುವವರ ಆದಾಯ ತಗ್ಗುವ ನಿರೀಕ್ಷೆಯಿದೆ.