
ನೇಪಾಳದ ಗೋರ್ಖಾ ಜಿಲ್ಲೆಯ ಬುಢೀಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ಭಾನುವಾರ ಸುಮಾರು 50 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಈ ಪ್ರವಾಹದಲ್ಲಿ ಕನಿಷ್ಠ 10 ಜನರು ನಾಪತ್ತೆಯಾಗಿದ್ದು, ಸುಮಾರು 12 ಮನೆಗಳು ಹಾಗೂ ಎರಡು ಜಲವಿದ್ಯುತ್ ಯೋಜನೆಗಳು ಹಾನಿಗೊಳಗಾಗಿವೆ.
ಬುಢೀಗಂಡಕಿ ನದಿಯ ಉಪನದಿಯಾದ ಸಿಯಾರ್ ಹೊಳೆ ಮುಚ್ಚಿಹೋಗಿರುವುದು ಈ ಹಠಾತ್ ಪ್ರವಾಹಕ್ಕೆ ಕಾರಣವಿರಬಹುದು ಎಂದು ನಿವಾಸಿಗಳು ಶಂಕಿಸಿದ್ದಾರೆ.