
ಭಾರತ ಮತ್ತು ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1-0 ಅಂತರದಲ್ಲಿ ಗೆದ್ದುಕೊಂಡಿದ್ದು, ಕನ್ನಡಿಗ ದೇವದತ್ ಪಡಿಕ್ಕಲ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪಡಿಕ್ಕಲ್ ಸರಣಿಯಲ್ಲಿ ಒಟ್ಟು 328 ರನ್ ಗಳಿಸಿದರೆ, ಶ್ರೀಲಂಕಾದ ಸೋನಲ್ ದಿನುಷಾ 420 ರನ್ ಮತ್ತು ಭಾರತದ ಮಾನವ್ ಸುತಾರ್ 16 ವಿಕೆಟ್ ಪಡೆದು ಪ್ರಬಲ ಪೈಪೋಟಿ ನೀಡಿದ್ದರು.
ಸೋನಲ್ ದಿನುಷಾ ಅವರು 140 ಸರಾಸರಿಯಲ್ಲಿ 420 ರನ್ ಗಳಿಸಿ 8 ಸಿಕ್ಸರ್ಗಳನ್ನು ಬಾರಿಸಿದರೂ, ಪಡಿಕ್ಕಲ್ ಅವರ ನಿರ್ಣಾಯಕ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.