
ಉತ್ತರ ಕರ್ನಾಟಕದ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ದೆಹಲಿ-ಹುಬ್ಬಳ್ಳಿ ಮತ್ತು ದೆಹಲಿ-ಬೆಳಗಾವಿ ಮಾರ್ಗಗಳಲ್ಲಿ ಇಂಡಿಗೋ ಏರ್ಲೈನ್ಸ್ ಪ್ರತಿದಿನ ನೇರ ವಿಮಾನ ಸೇವೆಗಳನ್ನು ಆರಂಭಿಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ದೆಹಲಿ-ಹುಬ್ಬಳ್ಳಿ ವಿಮಾನವು (6E758) ಸಂಜೆ 4:30ಕ್ಕೆ ದೆಹಲಿಯಿಂದ ಹೊರಟು 6:55ಕ್ಕೆ ಹುಬ್ಬಳ್ಳಿ ತಲುಪಲಿದ್ದು, ಹುಬ್ಬಳ್ಳಿ-ದೆಹಲಿ ವಿಮಾನವು (6E2115) ಸಂಜೆ 7:30ಕ್ಕೆ ಹೊರಟು ರಾತ್ರಿ 10:05ಕ್ಕೆ ದೆಹಲಿ ತಲುಪಲಿದೆ.
ದೆಹಲಿ-ಬೆಳಗಾವಿ ವಿಮಾನವು (6E2511) ಬೆಳಗ್ಗೆ 6:15ಕ್ಕೆ ಹೊರಟು 8:40ಕ್ಕೆ ಬೆಳಗಾವಿ ತಲುಪಲಿದ್ದು, ಬೆಳಗಾವಿ-ದೆಹಲಿ ವಿಮಾನವು (6E2512) ಬೆಳಗ್ಗೆ 9:10ಕ್ಕೆ ಹೊರಟು 11:40ಕ್ಕೆ ದೆಹಲಿ ತಲುಪುವ ಮೂಲಕ ವಾರದ ಪ್ರತಿದಿನವೂ ಸಂಚರಿಸಲಿವೆ.