
ಅಮೆಜಾನ್ ಕಂಪನಿಯಲ್ಲಿ 46 ಲಕ್ಷ ರೂಪಾಯಿ ವಾರ್ಷಿಕ ವೇತನದ ಕ್ಲೌಡ್ ಎಂಜಿನಿಯರ್ ಹುದ್ದೆಯನ್ನು ತ್ಯಜಿಸಿ, ಲಕ್ನೋದ 27 ವರ್ಷದ ಶಾರದೇಂದು ತಿವಾರಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದಾರೆ.
ಬಿಹಾರದ ಗಯಾದಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪೂರ್ಣಗೊಳಿಸಿರುವ ಅವರು, ಇಂದು ನಡೆಯುವ 29ನೇ ಪಾಸಿಂಗ್-ಔಟ್ ಪರೇಡ್ ಮೂಲಕ ಲೆಫ್ಟಿನೆಂಟ್ ಶ್ರೇಣಿಯನ್ನು ಪಡೆಯಲಿದ್ದಾರೆ.
ತಂದೆ ಕ್ಯಾಪ್ಟನ್ ರಾಜ್ ಕುಮಾರ್ ತಿವಾರಿ ಅವರಿಂದ ಸ್ಫೂರ್ತಿ ಪಡೆದ ಶಾರದೇಂದು, 8 ಬಾರಿ ವಿಫಲರಾದರೂ ಎದೆಗುಂದದೆ ತಾಂತ್ರಿಕ ಪ್ರವೇಶ ಮಾರ್ಗದ ಮೂಲಕ ಸೇನೆಗೆ ಆಯ್ಕೆಯಾಗಿದ್ದಾರೆ.