
ಬೆಲ್ಜಿಯಂನ ಸಿಂಟ್ ಗಿಲಿಸ್ ಡೆಂಡರ್ಮಾಂಡೆ ಪ್ರದೇಶದಲ್ಲಿ ಚರಂಡಿ ಕಾಮಗಾರಿ ನಡೆಸುತ್ತಿದ್ದ 18 ವರ್ಷದ ಯುವಕನಿಗೆ ₹99 ಕೋಟಿ ಮೌಲ್ಯದ ಚಿನ್ನದ ನಿಧಿ ಸಿಕ್ಕಿದೆ.
1899ರಲ್ಲಿ ಸ್ಥಾಪನೆಯಾಗಿದ್ದ ಮದ್ಯ ತಯಾರಿಕಾ ಘಟಕದ ಮಾಲೀಕರ ಬಂಗಲೆಯ ಗೋಡೆಯೊಳಗೆ ಈ ಚಿನ್ನದ ಬಿಸ್ಕೆಟ್ ಮತ್ತು ನಾಣ್ಯಗಳನ್ನು ಇಡಲಾಗಿತ್ತು.
ಪ್ರಸ್ತುತ ಈ ನಿಧಿಯನ್ನು ಬ್ರಸೆಲ್ಸ್ ಖಜಾನೆಗೆ ವರ್ಗಾಯಿಸಲಾಗಿದ್ದು, ಈಸ್ಟ್ ಫ್ಲಾಂಡರ್ಸ್ ಪ್ರಾಸಿಕ್ಯೂಟರ್ ಕಚೇರಿಯು ಇದರ ಮೂಲದ ಬಗ್ಗೆ ತನಿಖೆ ನಡೆಸುತ್ತಿದೆ.