
ಬಾಹ್ಯಾಕಾಶ ರಾಕೆಟ್ ತಯಾರಿಕಾ ಸಂಸ್ಥೆ ಆಸ್ಟ್ರೋಬೇಸ್ ಮತ್ತು ಕೃಷಿ ವಲಯದ ಬೇಯರ್ ಕಂಪನಿಗಳು ಕ್ರಮವಾಗಿ ₹500 ಕೋಟಿ ಹಾಗೂ ₹200 ಕೋಟಿ ಬಂಡವಾಳ ಹೂಡಿಕೆ ಮಾಡಲಿವೆ.
ಆದಿನಾರಾಯಣ ಹೊಸಹಳ್ಳಿಯಲ್ಲಿ 10 ಎಕರೆ ಜಾಗದಲ್ಲಿ ರಾಕೆಟ್ ಎಂಜಿನ್ ತಯಾರಿಕಾ ಘಟಕ ತಲೆಎತ್ತಲಿದ್ದು, ಬೆಂಗಳೂರಿನಲ್ಲಿ ಬೇಯರ್ ಕಂಪನಿಯ ಜಿಸಿಸಿ ಕೇಂದ್ರ ನಿರ್ಮಾಣವಾಗಲಿದೆ.
ಮುಂದಿನ ವರ್ಷ ಏಪ್ರಿಲ್ನಲ್ಲಿ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮುನ್ನ ಯೋಜನೆಯ ಭೂಮಿಪೂಜೆ ನೆರವೇರಲಿದ್ದು, ಇದರಿಂದ ಒಟ್ಟು 1,470ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ.