
ಯುಎಸ್ ಓಪನ್ ಕ್ವಾರ್ಟರ್ ಫೈನಲ್ನಲ್ಲಿ ಅಮೆರಿಕದ ಬೆನ್ ಶೆಲ್ಟನ್ ವಿರುದ್ಧ ಕಾರ್ಲೋಸ್ ಅಲ್ಕರಾಝ್ ಸೋಲು ಕಂಡಿದ್ದು, ಅವರ 18 ಪಂದ್ಯಗಳ ಗೆಲುವಿನ ಸರಣಿ ಅಂತ್ಯಗೊಂಡಿದೆ.
4 ಗಂಟೆ 28 ನಿಮಿಷಗಳ ಕಾಲ ನಡೆದ ಈ ರೋಚಕ ಪಂದ್ಯದಲ್ಲಿ ಶೆಲ್ಟನ್ 6-7, 6-1, 6-3, 1-6, 7-6 (10-7) ಅಂತರದಲ್ಲಿ ಅಲ್ಕರಾಝ್ ಅವರನ್ನು ಮಣಿಸಿ ಸೆಮಿಫೈನಲ್ಗೆ ಪ್ರವೇಶಿಸಿದ್ದಾರೆ.
ಸೆಮಿಫೈನಲ್ನಲ್ಲಿ ಬೆನ್ ಶೆಲ್ಟನ್ ಅವರು ಫ್ರಾನ್ಸಿಸ್ ಟಿಯಾಫೊ ಅವರನ್ನು ಎದುರಿಸಲಿದ್ದು, ಟಿಯಾಫೊ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೈಕೆಲ್ಸನ್ ಅವರನ್ನು ಸೋಲಿಸಿ ಅರ್ಹತೆ ಪಡೆದಿದ್ದಾರೆ.