
ದುಬೈನಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ವಿಮಾನದಲ್ಲಿದ್ದ ಕೋ-ಪೈಲಟ್ನ ದಾಳಿಯ ಯತ್ನವನ್ನು ವಿಫಲಗೊಳಿಸಿ ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಶೌರ್ಯವನ್ನು ಮೆಚ್ಚಿ ಅಮೆರಿಕ ಸಂಸತ್ನಲ್ಲಿ ದ್ವಿಪಕ್ಷೀಯ ನಿರ್ಣಯ ಮಂಡಿಸಲಾಗಿದೆ.
ವಿಮಾನದಲ್ಲಿದ್ದ ಕೋ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಹಠಾತ್ ದಾಳಿ ನಡೆಸಿ ನಿಯಂತ್ರಣ ಸಾಧಿಸಲು ಯತ್ನಿಸಿದರೂ, ಗಂಭೀರ ಗಾಯಗೊಂಡಿದ್ದ ಸ್ಮಿತ್ ಮಚ್ಚರ್ ಕಾಕ್ಪಿಟ್ ಬಾಗಿಲು ತೆರೆದು ಇತರ ಸಿಬ್ಬಂದಿ ಸಹಾಯದಿಂದ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದರು.
ಈ ಕೃತ್ಯವನ್ನು ಭಯೋತ್ಪಾದನಾ ದಾಳಿಯ ಯತ್ನ ಎಂದು ಅಮೆರಿಕ ಸಂಸತ್ ಖಂಡಿಸಿದ್ದು, ಪ್ರಸ್ತುತ ಗಾಯಗೊಂಡಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಯುಎಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.