
ಭಾರತದ ರಾಜತಾಂತ್ರಿಕ ಅಧಿಕಾರಿ ಶಿವಾನಿ ಗುಪ್ತಾ ಅವರು ವಿಶ್ವಸಂಸ್ಥೆಯ ಅಡಳಿತ ಮತ್ತು ಆಯವ್ಯಯದ ಸಲಹಾ ಮಂಡಳಿಗೆ (ಎಸಿಎಬಿಕ್ಯು) ಆಯ್ಕೆಯಾಗಿದ್ದಾರೆ.
ಆಯ್ಕೆಯಾಗಿರುವ ಶಿವಾನಿ ಗುಪ್ತಾ ಅವರ ಮೂರು ವರ್ಷಗಳ ಅಧಿಕಾರಾವಧಿಯು ಮುಂದಿನ ಜನವರಿಯಿಂದ ಅಧಿಕೃತವಾಗಿ ಆರಂಭವಾಗಲಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅವಿಭಾಜ್ಯ ಅಂಗವಾಗಿರುವ ಈ ಸಮಿತಿಯು 21 ಸದಸ್ಯರನ್ನು ಒಳಗೊಂಡಿದ್ದು, ಭೌಗೋಳಿಕ ಪ್ರಾತಿನಿಧ್ಯ ಹಾಗೂ ಜಾಗತಿಕ ಕಾರ್ಯಗಳ ಕೊಡುಗೆಯ ಆಧಾರದ ಮೇಲೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ.