
ರಾಜ್ಯದಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಎಫ್ಬಿಟಿ (Future Book See Technology) ಆಪ್ ಮೂಲಕ ಲಕ್ಷಾಂತರ ರೂಪಾಯಿ ಹೂಡಿಕೆ ಸಂಗ್ರಹಿಸಿ ವಂಚಿಸಿರುವ ಜಾಲವೊಂದು ಬೆಳಕಿಗೆ ಬಂದಿದೆ.
ದೊಡ್ಡ ದೊಡ್ಡ ಹೊಟೇಲ್ಗಳಲ್ಲಿ ಸಭೆ ನಡೆಸಿ, 18,500 ರೂ. ಹೂಡಿಕೆಗೆ ಪ್ರತಿದಿನ ಬಡ್ಡಿ ಹಾಗೂ ಹಣ ದುಪ್ಪಟ್ಟಾಗುವ ಆಮಿಷವೊಡ್ಡಿ ಶಿವಮೊಗ್ಗ, ಬೆಂಗಳೂರು ಮತ್ತು ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನರಿಗೆ ವಂಚಿಸಲಾಗಿದೆ.
ಈ ಆಪ್ ಹಿಂದೆ ಆರೋಪವಿರುವ ಆರು ಮಂದಿಯ ವಿರುದ್ಧ ಸೈಬರ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.