
ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಆರೋಗ್ಯಕರ ಜೀವನಕ್ಕೆ ಹಿತ ಮತ್ತು ಮಿತ ಆಹಾರ ಸೇವನೆಯೇ ಮೂಲ ಸೂತ್ರ ಎಂದು ಕರೆ ನೀಡಿದ್ದಾರೆ.
ಸೂರ್ಯೋದಯಕ್ಕೂ ಮುನ್ನ ಆಹಾರ ಸೇವಿಸುವುದು ದೇಹಕ್ಕೆ ವಿಷವಾಗಬಹುದು ಎಂದು ಎಚ್ಚರಿಸಿದ ಅವರು, ಜೀರ್ಣವಾಗದ ಆಹಾರವೇ ಅನೇಕ ರೋಗಗಳಿಗೆ ಮೂಲ ಕಾರಣ ಎಂದು ತಿಳಿಸಿದ್ದಾರೆ.
ಗೋಕರ್ಣದ ಅನ್ನಬ್ರಹ್ಮ ಚಾತುರ್ಮಾಸ್ಯದಲ್ಲಿ 60 ದಿನಗಳ ಕಾಲ 300ಕ್ಕೂ ಅಧಿಕ ವೈವಿಧ್ಯಮಯ ಸಾತ್ವಿಕ ಆಹಾರಗಳನ್ನು ಭಕ್ತರಿಗೆ ಉಣಬಡಿಸುವ ವ್ಯವಸ್ಥೆ ಮಾಡಲಾಗಿದೆ.