
ಭಾರತದಲ್ಲಿ ವಾರ್ಷಿಕ ₹100 ಕೋಟಿಗೂ ಹೆಚ್ಚು ಆದಾಯ ಘೋಷಿಸಿದವರ ಸಂಖ್ಯೆ 2025–26ರ ಮೌಲ್ಯಮಾಪನ ವರ್ಷದಲ್ಲಿ 576ಕ್ಕೆ ಏರಿಕೆಯಾಗಿದ್ದು, ಕಳೆದ ಐದು ವರ್ಷಗಳಲ್ಲಿ ಇದು ನಾಲ್ಕು ಪಟ್ಟು ಹೆಚ್ಚಾಗಿದೆ.
2021–22ರಲ್ಲಿ ಈ ಸಂಖ್ಯೆ 142ರಷ್ಟಿತ್ತು ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.
ಇ20 ಪೆಟ್ರೋಲ್ ಬಳಕೆಯು ಸುರಕ್ಷಿತವಾಗಿದ್ದು, ದೇಶದಲ್ಲಿ 20 ಕೋಟಿಗೂ ಹೆಚ್ಚು ದ್ವಿಚಕ್ರ ವಾಹನಗಳು ಮತ್ತು 3 ಕೋಟಿಗೂ ಹೆಚ್ಚು ಕಾರುಗಳು ಈ ಇಂಧನವನ್ನು ಬಳಸುತ್ತಿವೆ ಎಂದು ಸರ್ಕಾರ ತಿಳಿಸಿದೆ.