
ಆಡಳಿತಾತ್ಮಕ ಹಿತದೃಷ್ಟಿಯಿಂದ ರಾಜ್ಯ ಪೊಲೀಸ್ ಇಲಾಖೆಯಲ್ಲಿ 8 ಮಂದಿ ಸಿವಿಲ್ ಡಿವೈಎಸ್ಪಿ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಹೊಸ ಆದೇಶದಂತೆ ಕೆಲವರ ವರ್ಗಾವಣೆಯನ್ನು ರದ್ದುಪಡಿಸಿ ಹಳೆಯ ಹುದ್ದೆಗಳಲ್ಲೇ ಮುಂದುವರಿಸಿದರೆ, ಇನ್ನು ಕೆಲವರನ್ನು ಲೋಕಾಯುಕ್ತ ಎಸ್ಐಟಿ, ಆಂತರಿಕ ಭದ್ರತಾ ವಿಭಾಗ, ಡಿ.ಸಿ.ಆರ್.ಇ ಹಾಗೂ ಸಿಐಡಿಗೆ ನಿಯೋಜಿಸಲಾಗಿದೆ.
ಅಧಿಕಾರಿಗಳು ತಕ್ಷಣವೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.