
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2026-27ನೇ ಸಾಲಿನ ಎಸ್ಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರ ತಾತ್ಕಾಲಿಕ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.
ಎಸ್ಸೆಸೆಲ್ಸಿ ಪರೀಕ್ಷೆ 1 ಮಾರ್ಚ್ 22ರಿಂದ ಏಪ್ರಿಲ್ 03ರವರೆಗೆ ಹಾಗೂ ಪರೀಕ್ಷೆ 2 ಮೇ 24ರಿಂದ 31ರವರೆಗೆ ನಡೆಯಲಿದೆ.
ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 27 ರಿಂದ ಮಾರ್ಚ್ 17ರ ವರೆಗೆ ಮತ್ತು ಪರೀಕ್ಷೆ-2 ಮೇ 03 ರಿಂದ 15ರ ವರೆಗೆ ಜರುಗಲಿವೆ.