
ಕೋಮಲ್ ಕುಮಾರ್ ಮತ್ತು ಸೋನಾಲ್ ಮೊಂತೆರೊ ನಾಯಕ ನಾಯಕಿಯಾಗಿ ನಟಿಸಿರುವ 'ರಿಲ್ಯಾಕ್ಸ್' ಸಿನಿಮಾವು ಅಕ್ಟೋಬರ್ 30ರಂದು ತೆರೆಗೆ ಬರಲಿದೆ.
ಈ ಮೊದಲು 'ರೋಲೆಕ್ಸ್' ಎಂದು ಶೀರ್ಷಿಕೆ ಹೊಂದಿದ್ದ ಈ ಚಿತ್ರಕ್ಕೆ 'ರಿಲ್ಯಾಕ್ಸ್' ಎಂದು ಮರುನಾಮಕರಣ ಮಾಡಲಾಗಿದ್ದು, ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಶ್ರೀನಿವಾಸ್ ಮಂಡ್ಯ ನಿರ್ದೇಶನದ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದು, ರಾಕೇಶ್ ತಿಲಕ್ ಛಾಯಾಚಿತ್ರಗ್ರಹಣವಿದೆ.