
ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ವಿಚಾರವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನವನ್ನು ಭಾರತ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ.
2008ರ ಮುಂಬೈ 26/11 ದಾಳಿ ಮತ್ತು 2025ರ ಏಪ್ರಿಲ್ 22ರ ಪಹಲ್ಗಾಮ್ ದಾಳಿಯನ್ನು ಜಗತ್ತು ಮರೆತಿಲ್ಲ ಎಂದು ಭಾರತದ ಪ್ರತಿನಿಧಿ ರಘು ಪುರಿ ಸ್ಪಷ್ಟಪಡಿಸಿದ್ದಾರೆ.
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಬಂಧನಕ್ಕೆ ಬಹುಮಾನ ಘೋಷಿಸುವ ಪಾಕಿಸ್ತಾನದ ನಾಟಕವನ್ನು ಬಯಲು ಮಾಡಿದ್ದು, ಆತ ಎಲ್ಲಿದ್ದಾನೆ ಎಂಬುದು ಪಾಕ್ ಸರ್ಕಾರಕ್ಕೆ ತಿಳಿದಿದೆ ಎಂದಿದೆ.