
ಯುಎಇಯಲ್ಲಿ ಶಾಲಾ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಕೇರಳದ ಸೈದಲವಿ ಕರಿಯೋಡನ್ ವರಿಚಾಲಿಲ್ ಅವರಿಗೆ ಬಿಗ್ ಟಿಕೆಟ್ ಲಾಟರಿಯಲ್ಲಿ 26 ಲಕ್ಷ ರೂ. ಬಹುಮಾನ ಲಭಿಸಿದೆ.
ಕಳೆದ 4 ವರ್ಷಗಳಿಂದ ಸ್ನೇಹಿತರೊಂದಿಗೆ ಸೇರಿ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಸೈದಲವಿ, ಈ ಹಣವನ್ನು ತಮ್ಮ ಕುಟುಂಬದ ಆರ್ಥಿಕ ಭದ್ರತೆಗಾಗಿ ಬಳಸುವುದಾಗಿ ತಿಳಿಸಿದ್ದಾರೆ.
ಇದೇ ಡ್ರಾದಲ್ಲಿ ಕೇರಳದ ಅಖಿಲ್ ಚಂದ್ರನ್ ಮತ್ತು ಶರತ್ ಶಶಿಧರನ್ ಸೇರಿದಂತೆ ಒಟ್ಟು ಐವರು ತಲಾ 1 ಲಕ್ಷ ದಿರ್ಹಾಮ್ (26 ಲಕ್ಷ ರೂ.) ಬಹುಮಾನವನ್ನು ಗೆದ್ದುಕೊಂಡಿದ್ದಾರೆ.