
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಬಶೋಲಿಯಲ್ಲಿ ಜಲವಿದ್ಯುತ್ ಯೋಜನಾ ಯೂನಿಟ್ನಲ್ಲಿ ಮಂಗಳವಾರ ಸಂಜೆ ಕರ್ತವ್ಯದ ಸ್ಥಳಕ್ಕೆ ಮಗುವನ್ನು ಕರೆತರುವ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ಸಿಐಎಸ್ಎಫ್ ಹೆಡ್ ಕಾನ್ಸ್ಟೇಬಲ್ ಗುಂಡಿನ ದಾಳಿ ನಡೆಸಿದ್ದಾರೆ.
ಆರೋಪಿ ಅವಧೇಶ್ ಕುಮಾರ್ ಸಿಂಗ್ ತನ್ನ ಸೇವಾ ಎಕೆ-47 ಬಂದೂಕಿನಿಂದ ಅಸಿಸ್ಟೆಂಟ್ ಕಮಾಂಡೆಂಟ್ ಅಂಕಿತ ಕುಮಾರ್ ಪಾಂಡೆ ಸೇರಿದಂತೆ ನಾಲ್ವರು ಸಹೋದ್ಯೋಗಿಗಳನ್ನು ಹತ್ಯೆಗೈದಿದ್ದು, ಘಟನಾ ಸಮಯದಲ್ಲಿ ಆತನ ಬಳಿ 150 ಜೀವಂತ ಗುಂಡುಗಳು ಇದ್ದವು.
ಗುಂಡಿನ ಸೌಂಡ್ ಕೇಳಿ ಧಾವಿಸಿದ ಇತರ ಸಿಐಎಸ್ಎಫ್ ಸಿಬ್ಬಂದಿ ಆರೋಪಿ ಅವಧೇಶ್ ಸಿಂಗ್ನನ್ನು ನಿಯಂತ್ರಿಸಿ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದು, ಆತನ ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.