
ಅದಾನಿ ಡಿಫೆನ್ಸ್ ಮತ್ತು ಏರೊಸ್ಪೇಸ್ ಸಂಸ್ಥೆಯು ಇಂಡೋ-ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಎಕೆ-203 ರೈಫಲ್‌ಗಳಿಗೆ 7.62x39 ಮಿಮೀ ಮದ್ದುಗುಂಡುಗಳನ್ನು ಪೂರೈಸಲು ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.
ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯ ಕೊರ್ವಾದಲ್ಲಿರುವ ಘಟಕದಲ್ಲಿ 6.01 ಲಕ್ಷ ಎಕೆ-203 ರೈಫಲ್‌ಗಳನ್ನು ತಯಾರಿಸಲು 2021ರ ಡಿಸೆಂಬರ್‌ನಲ್ಲಿ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು.
ಈ ಹೊಸ ಒಪ್ಪಂದವು ಕಾನ್ಪುರದಲ್ಲಿ ಉತ್ಪಾದನಾ ಘಟಕ ಹೊಂದಿರುವ ಅದಾನಿ ಡಿಫೆನ್ಸ್ ಮೂಲಕ ಮದ್ದುಗುಂಡುಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸುವುದಲ್ಲದೆ, ಆತ್ಮನಿರ್ಭರ ಭಾರತ ಉಪಕ್ರಮಕ್ಕೆ ಬಲ ನೀಡಲಿದೆ.