
ಪ್ರಯಾಣಿಕರ ಬೇಡಿಕೆ ಮತ್ತು ಓಣಂ ಹಬ್ಬದ ಹಿನ್ನೆಲೆಯಲ್ಲಿ, ಬೆಂಗಳೂರು-ಎರ್ನಾಕುಲಂ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಸೋಮವಾರದಿಂದ 8 ಬೋಗಿಗಳಿಂದ 16 ಬೋಗಿಗಳಿಗೆ ಹೆಚ್ಚಿಸಲಾಗಿದೆ.
ಈ ಬದಲಾವಣೆಯಿಂದಾಗಿ ರೈಲಿನ ಆಸನ ಸಾಮರ್ಥ್ಯವು ಸುಮಾರು 500 ರಿಂದ 1100ಕ್ಕೆ ಏರಿಕೆಯಾಗಿದ್ದು, ಈ ಮಾರ್ಗದಲ್ಲಿ ಸದ್ಯಕ್ಕೆ ಹೆಚ್ಚುವರಿ ರೈಲುಗಳ ಅಗತ್ಯವಿಲ್ಲ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಆಗಸ್ಟ್ 26ರ ಓಣಂ ಹಬ್ಬಕ್ಕಾಗಿ ಬೆಂಗಳೂರು ಕಂಟೋನ್ಮೆಂಟ್ನಿಂದ ಕಣ್ಣೂರಿಗೆ ಆಗಸ್ಟ್ 20ರಂದು ವಿಶೇಷ ರೈಲು ಸಂಚರಿಸಲಿದ್ದು, ಇದು 14 ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.