
ಭಾರತದಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನ ಇಳಿಕೆಯಾಗಿದ್ದು, ಇವತ್ತು ಗ್ರಾಮ್ಗೆ 290 ರೂ. ಕಡಿತಗೊಂಡಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಮ್ಗೆ 1,46,500 ರೂ. ಇದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,59,820 ರೂ.ಗೆ ತಲುಪಿದೆ.
ಬೆಳ್ಳಿ ಬೆಲೆಯೂ ಇಳಿಕೆಯಾಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ 25,500 ರೂ.ಗೆ ನಿಗದಿಯಾಗಿದೆ ಎಂದು ಪ್ರಮುಖ ಆಭರಣ ಮಳಿಗೆಗಳ ದರಪಟ್ಟಿ ತಿಳಿಸಿದೆ.