
ಮುಂಗಾರು ಮಳೆಯ ಕಾರಣದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಧೂಳಿನ ಪ್ರಮಾಣ ಕಡಿಮೆಯಾಗಿದ್ದು, ವಾಯು ಗುಣಮಟ್ಟ ಸೂಚ್ಯಂಕ (AQI) ಸುಧಾರಿಸಿದೆ.
ಬೆಂಗಳೂರಿನಲ್ಲಿ ಸರಾಸರಿ AQI 62 ರಿಂದ 65ರ ನಡುವೆ ದಾಖಲಾಗಿದ್ದು, ಇದು 'ಮಧ್ಯಮ' ಶ್ರೇಣಿಗೆ ಒಳಪಡುತ್ತದೆ ಎಂದು ವರದಿಯಾಗಿದೆ.
ಮಡಿಕೇರಿ ಮತ್ತು ಚಿಕ್ಕಬಳ್ಳಾಪುರದಲ್ಲಿ AQI 20ಕ್ಕಿಂತಲೂ ಕಡಿಮೆಯಿದ್ದು, ಅತ್ಯಂತ ಶುದ್ಧ ಗಾಳಿ ದಾಖಲಾಗಿದೆ, ಆದರೆ ಬಳ್ಳಾರಿ, ಬೀದರ್ ಮತ್ತು ಭಾಗಲಕೋಟೆಯಲ್ಲಿ AQI 50 ರಿಂದ 80ರಷ್ಟಿದೆ.