
ತಮಿಳುನಾಡಿನ 52 ಪ್ರಮುಖ ದೇವಾಲಯಗಳ ಒಳಗೆ ಸ್ಮಾರ್ಟ್‌ಫೋನ್ ಬಳಕೆ ಮತ್ತು ತೆಗೆದುಕೊಂಡು ಹೋಗುವುದನ್ನು ಸರ್ಕಾರ ನಿಷೇಧಿಸಿದ್ದು, ಈ ನಿಯಮ ಸೆಪ್ಟೆಂಬರ್ 2ರಿಂದ ಜಾರಿಗೆ ಬಂದಿದೆ.
ಭಕ್ತರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಪ್ರವೇಶ ದ್ವಾರದ ಕೌಂಟರ್‌ಗಳಲ್ಲಿ ಜಮಾ ಮಾಡಬೇಕಿದ್ದು, ಪ್ರತಿ ಫೋನ್‌ಗೆ 5 ರೂಪಾಯಿ ಶುಲ್ಕ ಪಾವತಿಸಿ ಟೋಕನ್ ಪಡೆಯಬೇಕಾಗುತ್ತದೆ.
ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಡಿಸೆಂಬರ್ 2, 2022ರಂದು ನೀಡಿದ ಆದೇಶದಂತೆ, ದೇವಾಲಯದ ಆಧ್ಯಾತ್ಮಿಕ ವಾತಾವರಣ ಕಾಪಾಡಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.