
ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯು ಸೆನ್ಸಾರ್ ಮಂಡಳಿಯನ್ನು (ಸಿಬಿಎಫ್‌ಸಿ) ಪುನರ್ರಚಿಸಿ, ತಕ್ಷಣದಿಂದ ಜಾರಿಗೆ ಬರುವಂತೆ 18 ಸದಸ್ಯರ ಹೊಸ ತಂಡವನ್ನು ನೇಮಿಸಿ ಆದೇಶ ಹೊರಡಿಸಿದೆ.
ಮೂರು ಗ್ರ್ಯಾಮಿ ಪ್ರಶಸ್ತಿ ವಿಜೇತ ಬೆಂಗಳೂರಿನ ಹೆಮ್ಮೆಯ ಸಂಗೀತ ಕಲಾವಿದ ರಿಕ್ಕಿ ಕೇಜ್ ಅವರು ಈ ಹೊಸ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಸುನಿಲ್ ಶೆಟ್ಟಿ, ಪ್ರೀತಿ ಜಿಂಟಾ, ಪಂಕಜ್ ತ್ರಿಪಾಠಿ ಸೇರಿದಂತೆ ಹಲವು ಗಣ್ಯರು ಇರುವ ಈ ಮಂಡಳಿಯ ಸದಸ್ಯರ ಅಧಿಕಾರ ಅವಧಿಯು ಮೂರು ವರ್ಷಗಳಾಗಿರಲಿದೆ.