International
ಪೆಸಿಫಿಕ್ ಸಾಗರದಲ್ಲಿ ಮೂರು ಪ್ರಬಲ ಭೂಕಂಪ: ವನವಾಟು ದ್ವೀಪಗಳಲ್ಲಿ ಸುನಾಮಿ ಎಚ್ಚರಿಕೆ

ಪೆಸಿಫಿಕ್ ಸಾಗರದಲ್ಲಿ ಮೂರು ಪ್ರಬಲ ಭೂಕಂಪ: ವನವಾಟು ದ್ವೀಪಗಳಲ್ಲಿ ಸುನಾಮಿ ಎಚ್ಚರಿಕೆ

tv9kannada2h
THE BRIEF
1

ದಕ್ಷಿಣ ಪೆಸಿಫಿಕ್ ಮಹಾಸಾಗರದ ವನವಾಟು ದ್ವೀಪಗಳಲ್ಲಿ ಶನಿವಾರ ಮುಂಜಾನೆ ಕೆಲವೇ ನಿಮಿಷಗಳ ಅಂತರದಲ್ಲಿ ರಿಕ್ಟರ್ ಮಾಪಕದಲ್ಲಿ ಕ್ರಮವಾಗಿ 7.2, 6.9 ಹಾಗೂ 6.3 ತೀವ್ರತೆಯ ಮೂರು ಪ್ರಬಲ ಭೂಕಂಪಗಳು ಸಂಭವಿಸಿವೆ.

2

ಮೊದಲ ಹಾಗೂ ಅತ್ಯಂತ ಪ್ರಬಲವಾದ 7.2 ತೀವ್ರತೆಯ ಭೂಕಂಪವು ಭಾರತೀಯ ಕಾಲಮಾನ ಬೆಳಗ್ಗೆ ಸುಮಾರು 8:12 ಕ್ಕೆ ಟೋರ್ಬಾ ಪ್ರಾಂತ್ಯದ ರಾಜಧಾನಿ ಸೋಲಾ ಪಟ್ಟಣದ ಪಶ್ಚಿಮಕ್ಕೆ 200 ಕಿ.ಮೀ ದೂರದಲ್ಲಿ ಸಮುದ್ರದ ಆಳದಲ್ಲಿ ದಾಖಲಾಗಿದೆ.

3

ಪ್ರಬಲ ಕಂಪನದ ಬೆನ್ನಲ್ಲೇ ಕರಾವಳಿ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದ್ದು, ಈವರೆಗೆ ಯಾವುದೇ ದೊಡ್ಡ ಅಲೆಗಳು ಅಪ್ಪಳಿಸಿರುವ ಅಥವಾ ಸಾವುನೋವು ಸಂಭವಿಸಿದ ವರದಿ ಬಂದಿಲ್ಲ.