
ಉಕ್ರೇನ್ನ ಕ್ರಿವಿ ರಿಹ್ ನಗರದಲ್ಲಿರುವ ಭಾರತೀಯ ಉದ್ಯಮಿ ಲಕ್ಷ್ಮೀ ಮಿತ್ತಲ್ ಅವರ ಆರ್ಸೆಲರ್ ಮಿತ್ತಲ್ ಉಕ್ಕು ಕಾರ್ಖಾನೆಯ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ.
ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಕಾರ್ಮಿಕರು ಮತ್ತು ಗುತ್ತಿಗೆದಾರರು ಗಾಯಗೊಂಡಿದ್ದು, ಕಾರ್ಖಾನೆಯ ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ.
ರಷ್ಯಾದ ಈ ಸರಣಿ ದಾಳಿಯು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ತವರು ಪ್ರದೇಶವಾದ ಕ್ರಿವಿ ರಿಹ್ ಸೇರಿದಂತೆ ಹಲವು ಮಿಲಿಟರಿ ಕೈಗಾರಿಕೆಗಳನ್ನು ಗುರಿಯಾಗಿಸಿಕೊಂಡಿದೆ.