
ದಕ್ಷಿಣ ಜೋರ್ಡಾನ್ನ ಕರಕ್ ಪ್ರಾಂತ್ಯದ ಹಮ್ಮೌದ್ ಗ್ರಾಮದಲ್ಲಿರುವ ಗ್ರೀಕ್ ಆರ್ಥೊಡಾಕ್ಸ್ ಚರ್ಚ್ನಲ್ಲಿ ಅಂತ್ಯಕ್ರಿಯೆಯ ವೇಳೆ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 7 ಜನರು ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ.
ದಾಳಿ ನಡೆದ ಸಂದರ್ಭದಲ್ಲಿ ಚರ್ಚ್ನಲ್ಲಿ ಸುಮಾರು 150 ರಿಂದ 200 ಜನರು ಇದ್ದರು. ಗಾಯಗೊಂಡಿರುವ 40 ಮಂದಿಯಲ್ಲಿ ಇಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಮೃತರ ಮತ್ತು ಗಾಯಾಳುಗಳ ಪೈಕಿ ಹೆಚ್ಚಿನವರು 50 ರಿಂದ 70 ವರ್ಷದೊಳಗಿನವರಾಗಿದ್ದಾರೆ.
ಈ ಹೇಯ ಕೃತ್ಯದ ಬೆನ್ನಲ್ಲೇ ಜೋರ್ಡಾನ್ ಸರ್ಕಾರವು ದೇಶಾದ್ಯಂತ 3 ದಿನಗಳ ಅಧಿಕೃತ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.