
ಹುಬ್ಬಳ್ಳಿಯಿಂದ ಅತ್ತಿಗೇರಿಗೆ ತೆರಳುತ್ತಿದ್ದ ಸಾರಿಗೆ ಬಸ್‌ನ ಹೆಡ್‌ಲೈಟ್ ಸಂಶಿ ಬಳಿ ಕೆಟ್ಟಿದ್ದರಿಂದ, ಚಾಲಕ ಪ್ರಯಾಣಿಕರ ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ 15 ಕಿ.ಮೀ ದೂರ ಬಸ್ ಚಲಾಯಿಸಿದ್ದಾರೆ.
ಸೆಪ್ಟೆಂಬರ್ 5ರ ರಾತ್ರಿ ನಡೆದ ಈ ಘಟನೆಯಲ್ಲಿ, ಚಾಲಕ ಒಂದೂವರೆ ಗಂಟೆಗಳ ಕಾಲ ನಿಧಾನವಾಗಿ ಬಸ್ ಚಲಾಯಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಗ್ರಾಮಗಳಿಗೆ ತಲುಪಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ಓಡಾಡುವ ಹಳೆಯ ಬಸ್‌ಗಳ ದುಸ್ಥಿತಿಯ ಬಗ್ಗೆ ಈ ಘಟನೆಯು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.