
ಬೆಂಗಳೂರು-ಮುಂಬೈ ನಡುವಿನ ಬಹುನಿರೀಕ್ಷಿತ ಸ್ಲೀಪರ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಇದೇ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವ ದಿನದಂದು ತನ್ನ ಚೊಚ್ಚಲ ಸಂಚಾರವನ್ನು ಆರಂಭಿಸಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ಖಚಿತಪಡಿಸಿವೆ.
ಬೆಂಗಳೂರಿನ ಎಸ್ಎಂವಿಟಿ ನಿಲ್ದಾಣದಿಂದ ಮುಂಬೈನ ಸಿಎಸ್ಎಂಟಿ ವರೆಗೆ ವಾರದ ಆರು ದಿನ ಸಂಚರಿಸಲಿರುವ ಈ ರೈಲು, ಗಂಟೆಗೆ 130 ಕಿ.ಮೀ ವೇಗದಲ್ಲಿ ಸಾಗಿ 1200 ಕಿ.ಮೀ ಗೂ ಅಧಿಕ ದೂರದ ಪ್ರಯಾಣವನ್ನು 15-16 ಗಂಟೆಗಳಲ್ಲಿ ಕ್ರಮಿಸಲಿದೆ.
ಉದ್ಘಾಟನಾ ಸಂಚಾರದ ಬೆನ್ನಲ್ಲೇ ಪ್ರಯಾಣಿಕರಿಗೆ ಲಭ್ಯವಾಗುವ ವಾಣಿಜ್ಯ ಸಂಚಾರದ ವೇಳಾಪಟ್ಟಿ ಮತ್ತು ಅಧಿಸೂಚನೆಯನ್ನು ರೈಲ್ವೆ ಇಲಾಖೆಯು ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ.