
ಕಳೆದ 12 ವರ್ಷಗಳಲ್ಲಿ ದೇಶದ ಮೆಟ್ರೊ ಜಾಲ 248 ಕಿ.ಮೀ.ಗಳಿಂದ 1,200 ಕಿ.ಮೀ.ಗೆ ವಿಸ್ತರಣೆಯಾಗಿದ್ದು, ಪ್ರಸ್ತುತ 26 ನಗರಗಳಲ್ಲಿ ಮೆಟ್ರೊ ಸೇವೆ ಲಭ್ಯವಿದೆ.
ಪುಣೆ ಮೆಟ್ರೊದ 23 ಕಿ.ಮೀ. ಉದ್ದದ ಪಿಂಕ್ ಲೈನ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದು, ಈ ಮಾರ್ಗವನ್ನು ಮಹಿಳಾ ಸಿಬ್ಬಂದಿ ನಿರ್ವಹಿಸಲಿದ್ದಾರೆ.
ಒಟ್ಟು ₹21,800 ಕೋಟಿ ಹೂಡಿಕೆಯಲ್ಲಿ ನಿರ್ಮಾಣವಾಗಲಿರುವ ನಾಲ್ಕು ಹೊಸ ಮೆಟ್ರೊ ಕಾರಿಡಾರ್‌ಗಳಿಗೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದ್ದಾರೆ.