
ಬ್ರಿಕ್ಸ್ ಶೃಂಗಸಭೆ 2026ರ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಉಭಯ ನಾಯಕರು ರಕ್ಷಣೆ, ಇಂಧನ ಭದ್ರತೆ, ಸ್ಥಳೀಯ ಕರೆನ್ಸಿ ಪಾವತಿ ವ್ಯವಸ್ಥೆ ಹಾಗೂ ಎಸ್-400 ಕ್ಷಿಪಣಿ ವ್ಯವಸ್ಥೆಯ ಡೆಲಿವರಿ ಕುರಿತು ಚರ್ಚೆ ನಡೆಸಲಿದ್ದಾರೆ.
ಉಕ್ರೇನ್ ಯುದ್ಧ ಆರಂಭವಾದ ನಂತರ ರಷ್ಯಾದ ಗಡಿ ದಾಟಿ ಪುಟಿನ್ ಭಾಗವಹಿಸುತ್ತಿರುವ ಮೊದಲ ಬ್ರಿಕ್ಸ್ ಸಭೆ ಇದಾಗಿದೆ.