
ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ವತಿಯಿಂದ ತಮಿಳುನಾಡಿನ ಮಯಿಲಾಡುತುರೈನಲ್ಲಿ 60 ಹಾಸಿಗೆಗಳ ಉಚಿತ ಆಸ್ಪತ್ರೆ ಮತ್ತು ತೆಂಕಾಸಿಯಲ್ಲಿ ಉಚಿತ ಗುರುಕುಲ ಆರಂಭಿಸಲಾಗುವುದು.
ದಿಂಡಿಗಲ್‌ನ ಶ್ರೀ ಸತ್ಯ ಸಾಯಿ ಮೀನಾಕ್ಷಿನಿಕೇತನ ಗುರುಕುಲವನ್ನು ವಿಶ್ವವಿದ್ಯಾಲಯ ಮಟ್ಟಕ್ಕೆ ಏರಿಸುವ ಉದ್ದೇಶವಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು.
ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಈ ಮಿಷನ್ ಕೇಂದ್ರಸ್ಥಾನ ಹೊಂದಿದೆ.