
ಹೈದರಾಬಾದ್ನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಅಂಗಸಂಸ್ಥೆಯಾದ RCI, ರಿಸರ್ಚ್ ಅಸೋಸಿಯೇಟ್ ಮತ್ತು ಜೂನಿಯರ್ ಸಂಶೋಧನಾ ಫೆಲೋ (JRF) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
JRF ಹುದ್ದೆಗೆ ಗರಿಷ್ಠ 28 ವರ್ಷ ಮತ್ತು RA ಹುದ್ದೆಗೆ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಆಸಕ್ತರು ಸೆಪ್ಟೆಂಬರ್ 13ರೊಳಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಎಂಜಿನಿಯರಿಂಗ್ ಅಭ್ಯರ್ಥಿಗಳು B.E/B.Tech ಜೊತೆಗೆ ಗೇಟ್ (GATE) ಅಂಕ ಅಥವಾ M.Tech ಹೊಂದಿರಬೇಕು ಮತ್ತು ವಿಜ್ಞಾನ ವಿಭಾಗದವರು M.Sc ಜೊತೆಗೆ NET/GATE/SLET ಉತ್ತೀರ್ಣರಾಗಿರಬೇಕು.