
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಆರ್ಬಿಐ ಅಂದಾಜಿಸಿರುವ ಶೇ. 6.7ಕ್ಕಿಂತ ಹೆಚ್ಚಾಗಿ, ಶೇ. 7ರ ಗಡಿಯನ್ನು ಸುಲಭವಾಗಿ ದಾಟಲಿದೆ ಎಂದು 16ನೇ ಹಣಕಾಸು ಆಯೋಗದ ಅಧ್ಯಕ್ಷ ಅರವಿಂದ್ ಪನಗರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೂಲಸೌಕರ್ಯ ವಿಸ್ತರಣೆ, ಜಿಎಸ್ಟಿ ವ್ಯವಸ್ಥೆಯ ಸುಧಾರಣೆ ಹಾಗೂ ಆದಾಯ ತೆರಿಗೆ ಹಂತಗಳ ಸರಳೀಕರಣದ ಪರಿಣಾಮವಾಗಿ ದೇಶದ ಆರ್ಥಿಕ ತಳಹದಿ ಬಲವಾಗಿದ್ದು, ಇತ್ತೀಚಿನ ತ್ರೈಮಾಸಿಕಗಳಲ್ಲಿ ಉತ್ತಮ ವೇಗ ದಾಖಲಾಗಿದೆ.
ಆರ್ಥಿಕತೆಯ ದೀರ್ಘಾವಧಿ ಬೆಳವಣಿಗೆಗಾಗಿ ರಾಜ್ಯಗಳು 4 ಪ್ರಮುಖ ಕಾರ್ಮಿಕ ಸಂಹಿತೆಗಳನ್ನು ಶೀಘ್ರ ಜಾರಿಗೊಳಿಸಬೇಕು ಮತ್ತು ಅಮೆರಿಕ ಹಾಗೂ ಇಯು ಜೊತೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಬೇಕು ಎಂದು ಪನಗರಿಯಾ ಸಲಹೆ ನೀಡಿದ್ದಾರೆ.