
ವಿಶ್ವವಿದ್ಯಾಲಯದ ಅಧ್ಯಕ್ಷರ ನಕಲಿ ವಾಟ್ಸ್ಆ್ಯಪ್ ಪ್ರೊಫೈಲ್ ಸೃಷ್ಟಿಸಿ ಅಕೌಂಟೆಂಟ್ಗೆ ವಂಚಿಸಿ 1.40 ಕೋಟಿ ರೂ. ಎಗರಿಸಿದ್ದ ಬಾಸ್ ಸ್ಕ್ಯಾಮ್ ಜಾಲವನ್ನು ಕರ್ನಾಟಕ ಸೈಬರ್ ಕಮಾಂಡ್ ಪೊಲೀಸರು ಭೇದಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮ್ಯೂಲ್ ಖಾತೆಗಳನ್ನು ನೀಡಿ ಹಣ ಪಡೆಯುತ್ತಿದ್ದ ನಾಲ್ವರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, 8.50 ಲಕ್ಷ ರೂ. ನಗದು ಹಾಗೂ 4 ಮೊಬೈಲ್ ಜಪ್ತಿ ಮಾಡಲಾಗಿದೆ.
ವಂಚಕರು ಜಿಪ್ ಫೈಲ್ ಬಳಸಿ ಕ್ರೋಮ್ ಬ್ರೌಸರ್ ಮೂಲಕ ವಾಟ್ಸ್ಆ್ಯಪ್ ವೆಬ್ಗೆ ಲಾಗಿನ್ ಆಗಿ, ಹಣಕಾಸು ವಹಿವಾಟುಗಳ ಮೇಲೆ ನಿಗಾ ಇಟ್ಟು ಈ ಕೃತ್ಯ ಎಸಗಿರುವುದು ತನಿಖೆಯಿಂದ ಬಯಲಾಗಿದೆ.