
ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಪೂರ್ಣಾವಧಿ ನಿರ್ದೇಶಕರ ನೇಮಕಾತಿಗೆ ಇರುವ ಕನಿಷ್ಠ ವಯೋಮಿತಿಯನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಲು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
ದೇಶದಲ್ಲಿ ಹೆಚ್ಚುತ್ತಿರುವ ಸ್ಟಾರ್ಟಪ್ಗಳನ್ನು ಗಮನದಲ್ಲಿಟ್ಟುಕೊಂಡು, ಯುವ ಉದ್ಯಮಿಗಳಿಗೆ ಕಾನೂನಾತ್ಮಕವಾಗಿ ಕಂಪನಿ ಮುನ್ನಡೆಸಲು ಅವಕಾಶ ನೀಡುವ ಉದ್ದೇಶದಿಂದ ಈ ಪ್ರಸ್ತಾಪ ಮಾಡಲಾಗಿದೆ.
ಅಲ್ಲದೆ, ಎಂಡಿ ಹುದ್ದೆಗೆ ಗರಿಷ್ಠ ವಯೋಮಿತಿಯನ್ನು ಪ್ರಸ್ತುತ ಇರುವ 70 ವರ್ಷದಿಂದ 75 ವರ್ಷಕ್ಕೆ ಏರಿಸಲು ಸಹ ಸಮಿತಿಯು ಸರ್ಕಾರಕ್ಕೆ ಸಲಹೆ ನೀಡಿದೆ.