
ದೀನ್ ದಯಾಳ್ ಉಪಾಧ್ಯಾಯ ಅವರ 110ನೇ ಜನ್ಮದಿನೋತ್ಸವದ ಅಂಗವಾಗಿ ಬಿಜೆಪಿ ಪ್ರಧಾನ ಕಚೇರಿಯ ಎದುರಿಗಿನ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ 'ಭಜನ್ ಕ್ಲಬ್ಬಿಂಗ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡರು.
ಕಾರ್ಯಕ್ರಮದ ಮೊದಲನೇ ಸಾಲಿನಲ್ಲಿ ಕುಳಿತಿದ್ದ ಪ್ರಧಾನಿ ಮೋದಿ ಅವರು ಶ್ರೀರಾಮನಿಗೆ ಸಂಬಂಧಿಸಿದ ಭಜನೆಗೆ ಚಪ್ಪಾಳೆ ತಟ್ಟುತ್ತಾ ಮತ್ತು ತಂಬೂರಿಯಂತಹ ವಾದ್ಯವನ್ನು ಬಾರಿಸಿ ಗಮನ ಸೆಳೆದರು.
ಯುವಜನರು ಆಧುನಿಕ ಕನ್ಸರ್ಟ್ ಶೈಲಿಯಲ್ಲಿ ಸಾಂಪ್ರದಾಯಿಕ ಭಕ್ತಿಗೀತೆಗಳಿಗೆ ನೃತ್ಯ ಮಾಡುತ್ತಾ ಸಂಭ್ರಮಿಸುವ ಈ ಆಧುನಿಕ ಸಾಂಸ್ಕೃತಿಕ ಟ್ರೆಂಡ್ ಭಾರತದ ಹಲವು ನಗರಗಳು ಹಾಗೂ ವಿದೇಶಗಳಲ್ಲಿ ಜನಪ್ರಿಯತೆ ಪಡೆಯುತ್ತಿದೆ.