
ಸ್ವಾತಂತ್ರ್ಯೋತ್ಸವದ ಅಂಗವಾಗಿ ಗಂಡಭೇರುಂಡ ಲಾಂಛನ ಮತ್ತು ಕನ್ನಡ ಅಂಕಿಗಳನ್ನು ಹೊಂದಿರುವ ವಿಶೇಷ ಹೆಚ್‌ಎಂಟಿ ವಾಚ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್‌ಎಂಟಿ ಕೇಂದ್ರದಲ್ಲಿ ಈ ವಾಚ್‌ಗಳನ್ನು ಖರೀದಿಸಲು ಸಾರ್ವಜನಿಕರು ಮುಂಜಾನೆಯಿಂದಲೇ 2 ಕಿ.ಮೀಗೂ ಅಧಿಕ ಉದ್ದದ ಸಾಲಿನಲ್ಲಿ ನಿಂತಿದ್ದರು.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯ ಮೇರೆಗೆ ಈ ವಿಶೇಷ ಆವೃತ್ತಿಯ ವಾಚ್‌ಗಳನ್ನು ಸಾರ್ವಜನಿಕರಿಗಾಗಿ ಲಭ್ಯವಾಗಿಸಲಾಗಿದೆ.