
ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ನೀಟ್-ಯುಜಿ ಪರೀಕ್ಷೆಯನ್ನು ಸಾಂಪ್ರದಾಯಿಕ ಪೆನ್-ಪೇಪರ್ ಮಾದರಿಯಿಂದ ಜೆಇಇ ಮಾದರಿಯ ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (CBT) ಬದಲಾಯಿಸಲು ನಿರ್ಧರಿಸಲಾಗಿದೆ.
ಹೊಸ ಮಾದರಿಯಡಿ 22 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಒಂದೇ ದಿನ ಪರೀಕ್ಷೆ ನಡೆಸುವ ಬದಲು, 12 ರಿಂದ 14 ಪಾಳಿಗಳಲ್ಲಿ ಹಲವು ದಿನಗಳ ಕಾಲ ಪರೀಕ್ಷೆ ನಡೆಸಲಾಗುತ್ತದೆ.
ಇಸ್ರೋ ಮಾಜಿ ಅಧ್ಯಕ್ಷ ಡಾ. ಕೆ. ರಾಧಾಕೃಷ್ಣನ್ ನೇತೃತ್ವದ ಸಮಿತಿಯ ಶಿಫಾರಸಿನಂತೆ, ಪಾರದರ್ಶಕತೆಗಾಗಿ ದೇಶಾದ್ಯಂತ 1 ಸಾವಿರ ಶಾಶ್ವತ ಸರ್ಕಾರಿ ಪರೀಕ್ಷಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.