Education
ಬೆಂಗಳೂರಿನಲ್ಲಿ ಸರ್ಕಾರಿ ಶಾಲೆಗಳ ಸಮಯ ಬದಲಾವಣೆಗೆ ಗಂಭೀರ ಚಿಂತನೆ

ಬೆಂಗಳೂರಿನಲ್ಲಿ ಸರ್ಕಾರಿ ಶಾಲೆಗಳ ಸಮಯ ಬದಲಾವಣೆಗೆ ಗಂಭೀರ ಚಿಂತನೆ

tv9kannada52m
THE BRIEF
1

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸರ್ಕಾರಿ ಶಾಲೆಗಳ ವೇಳಾಪಟ್ಟಿಯನ್ನು ಬದಲಾಯಿಸಲು ಶಿಕ್ಷಣ ಇಲಾಖೆ ಚಿಂತಿಸಿದೆ.

2

ಸದ್ಯ ಬೆಳಗ್ಗೆ 10:30 ರಿಂದ ಸಂಜೆ 4:30 ರವರೆಗೆ ಇರುವ ಸರ್ಕಾರಿ ಶಾಲಾ ಅವಧಿಯನ್ನು ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 3:30 ರವರೆಗೆ ಮರುನಿಗದಿಪಡಿಸಲು ಶಿಕ್ಷಕರ ಸಂಘಟನೆಗಳು ಸಲಹೆ ನೀಡಿವೆ.

3

ಈ ಕುರಿತು ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಸಂಚಾರ ಪೊಲೀಸ್, ಬಿಎಂಟಿಸಿ ಹಾಗೂ ಪೋಷಕರ ಸಂಘಟನೆಗಳೊಂದಿಗೆ ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ನಡೆಯಲಿದೆ.