
ಬೆಂಗಳೂರಿನ ಮಿನರ್ವ್ ಸರ್ಕಲ್ನಲ್ಲಿರುವ ಕೃಪಾ ಹೆಲ್ತ್ಕೇರ್ ಮೇಲೆ ವಿಶೇಷ ತನಿಖಾ ತಂಡ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿ ದಾಳಿ ನಡೆಸಿ, ಕ್ಯಾನ್ಸರ್ ಮಾತ್ರೆ ಹಾಗೂ ಜೀವ ರಕ್ಷಕ ಔಷಧಿಗಳ ನಕಲಿ ಜಾಲ ಪತ್ತೆ ಮಾಡಿ ಮಾಲೀಕ ವೀರೇಶ್ಕುಮಾರ್ ಅವರನ್ನು ಬಂಧಿಸಿದೆ.
ರಾಮನಗರದ ಬಿಡದಿ ಹಾಗೂ ದೊಡ್ಡೇರಿ ಫಾರ್ಮ್ಹೌಸ್ನಲ್ಲಿ ಸಿಕ್ಕ ಸುಳಿದ ಆಧಾರದ ಮೇಲೆ ಕರ್ನಾಟಕ, ಹರಿಯಾಣ, ಹಿಮಾಚಲ ಪ್ರದೇಶ ಸೇರಿದಂತೆ ಆರು ರಾಜ್ಯಗಳ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಶುಕ್ರವಾರ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.
ಬೆಂಗಳೂರಿನ 90ಕ್ಕೂ ಹೆಚ್ಚು ಆಸ್ಪತ್ರೆಗಳು ಹಾಗೂ ಕ್ಲಿನಿಕ್ಗಳಿಗೆ ಶೇ 50ರಷ್ಟು ರಿಯಾಯಿತಿಯಲ್ಲಿ ಈ ನಕಲಿ ಔಷಧಿಗಳನ್ನು ಪೂರೈಸಲಾಗುತ್ತಿತ್ತು ಎಂದು ತನಿಖಾ ತಂಡ ಶಂಕಿಸಿದ್ದು, ತನಿಖೆ ಮುಂದುವರಿದಿದೆ.