
ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರಿಗೆ ಬಿಸಿಸಿಐ ನಡೆಸುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಎರಡು ಪಂದ್ಯಗಳಿಗೆ ಬಿಹಾರ ಹಿರಿಯರ ತಂಡದ ನಾಯಕತ್ವವನ್ನು ವಹಿಸಲಾಗಿದೆ.
ನವೆಂಬರ್ 14ರಿಂದ ಇಂದೋರ್‌ನಲ್ಲಿ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಬಿಹಾರ ತಂಡ ನವೆಂಬರ್ 14ರಂದು ಸೌರಾಷ್ಟ್ರ ವಿರುದ್ಧ ಹಾಗೂ ನವೆಂಬರ್ 16ರಂದು ರೈಲ್ವೇಸ್ ವಿರುದ್ಧ ಕಾದಾಡಲಿದ್ದು, ಬಿಸಿಎ ಅಧ್ಯಕ್ಷ ಹರ್ಷ ವರ್ಧನ್ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಇಷ್ಟು ಚಿಕ್ಕ ವಯಸ್ಸಿನಲ್ಲಿ ಹಿರಿಯರ ತಂಡದ ನಾಯಕತ್ವ ನೀಡಿ ಬಾಲಕನ ಮೇಲೆ ಅನಗತ್ಯ ಒತ್ತಡ ಹೇರುವುದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದ್ದು, ಈ ನಾಯಕತ್ವದ ಬಳಿಕ ವೈಭವ್ ದೋಹಾದಲ್ಲಿ ಎಸಿಸಿ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಭಾರತ ಎ ತಂಡವನ್ನು ಸೇರಲಿದ್ದಾರೆ.