
ವಾರ್ಷಿಕ 40 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದ ಐಟಿ ಉದ್ಯೋಗಿಯೊಬ್ಬರು ಷೇರು ಮಾರುಕಟ್ಟೆಯ ಡೇ ಟ್ರೇಡಿಂಗ್ನಲ್ಲಿ 50 ಲಕ್ಷ ರೂಪಾಯಿ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಟೆಲಿಗ್ರಾಂ ಚಾನೆಲ್ ನೀಡಿದ ಸಿಗ್ನಲ್ ಆಧಾರದಲ್ಲಿ ಆರಂಭದಲ್ಲಿ ಲಾಭ ಗಳಿಸಿದ್ದ ಟೆಕ್ಕಿ, ನಂತರ ಸ್ವಂತ ವಿಶ್ಲೇಷಣೆಯ ಮೇಲೆ ಹೂಡಿಕೆ ಮಾಡಿ ಭಾರಿ ಮೊತ್ತವನ್ನು ಕಳೆದುಕೊಂಡಿದ್ದಾರೆ.
ಸಾಲದ ಸುಳಿಯಿಂದ ಪಾರಾಗಲು ಟೆಕ್ಕಿ ತಮ್ಮ ಬಳಿಯಿರುವ ಎರಡು ಎಕರೆ ಕೃಷಿ ಜಮೀನನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ಅವರ ಸಂಬಂಧಿ ವಿಕಾಸ್ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.